ಬೆಂಗಳೂರಿನಲ್ಲಿ ಇವಿ ಬ್ಯಾಟರಿ, ಚಾರ್ಜರ್ ಪರೀಕ್ಷಾ ಸೌಲಭ್ಯ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶಂಕುಸ್ಥಾಪನೆ ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯದ ಪ್ರಮುಖ ಕಂಪನಿಗಳಿಗೆ ಸಮೀಪದಲ್ಲಿ ಈ ಪರೀಕ್ಷಾ ಸೌಲಭ್ಯದ ಸ್ಥಾಪನೆಯು ಉದ್ಯಮಕ್ಕೆ ಗೇಮ್‌ ಚೇಂಜರ್‌ ಆಗಲಿದೆ. ಬೆಂಗಳೂರು: ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಅವರಿಂದು ನಗರದ ಜಕ್ಕೂರಿನಲ್ಲಿರುವ ಎನ್‌.ಟಿ.ಎಚ್ - ಆರ್‌ ಆರ್‌ ಎಸ್‌ ಎಲ್‌ ಕ್ಯಾಂಪಸ್‌ ನಲ್ಲಿ ಬಹುನಿರೀಕ್ಷಿತ ಇವಿ ಬ್ಯಾಟರಿ ಮತ್ತು ಚಾರ್ಜರ್ ಪರೀಕ್ಷಾ ಸೌಲಭ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ, ಜಂಟಿ ಕಾರ್ಯದರ್ಶಿ, ಎನ್‌.ಟಿ.ಎಚ್‌ ನ ಮಹಾನಿರ್ದೇಶಕರು ಮತ್ತು ದೇಶಾದ್ಯಂತ ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ಉದ್ಯಮದ ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.ಬಳಿಕ ಮಾತನಾಡಿದ ಪ್ರಲ್ಹಾದ ಜೋಶಿ, ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ವಿದ್ಯುತ್ ಚಾಲಿತ ಉದ್ಯಮಕ್ಕೆ ಈ ಸೌಲಭ್ಯದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ಇವಿ ಬ್ಯಾಟರಿ ಮತ್ತು ಚಾರ್ಜರ್ ತಯಾರಿಕಾ ವಲಯದ ಪ್ರಮುಖ ಕಂಪನಿಗಳಿಗೆ ಸಮೀಪದಲ್ಲಿ ಈ ಪರೀಕ್ಷಾ ಸೌಲಭ್ಯದ ಸ್ಥಾಪನೆಯು ಉದ್ಯಮಕ್ಕೆ ಗೇಮ್‌ ಚೇಂಜರ್‌ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಬೆಂಗಳೂರಿನ ಜೊತೆಗೆ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಶೀಘ್ರದಲ್ಲೇ ಇದೇ ರೀತಿಯ ಸೌಲಭ್ಯಗಳನ್ನು ಸ್ಥಾಪಿಸಲು ಎನ್‌ ಟಿ ಎಚ್‌ ಸಜ್ಜಾಗಿದೆ ಎಂದು ಅವರು ಹೇಳಿದರು.ಹೊಸ ಸೌಲಭ್ಯವು ಈ ತಯಾರಕರಿಗೆ ಸಮಗ್ರ ಪರೀಕ್ಷೆ ಮತ್ತು ಪ್ರಮಾಣೀಕರಣ ಸೇವೆಗಳನ್ನು ಒದಗಿಸುವ ಮೂಲಕ ಅತ್ಯುನ್ನತ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಅಮೂಲ್ಯವಾದ ನೆರವು ನೀಡುತ್ತದೆ. ಇಂತಹ ಉತ್ತಮ ಗುಣಮಟ್ಟದ ಪರೀಕ್ಷಾ ಸೌಲಭ್ಯದ ಲಭ್ಯತೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ತಯಾರಕರಿಗೆ ಗಮನಾರ್ಹ ಸ್ಪರ್ಧಾತ್ಮಕತೆಯನ್ನು ಒದಗಿಸುತ್ತದೆ, ಅವರ ಉತ್ಪನ್ನಗಳು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಮತ್ತು ರಫ್ತಿಗೆ ಉತ್ತಮ ಸ್ಥಿತಿಯಲ್ಲಿರುತ್ತವೆ ಎಂದು ಜೋಶಿ ಹೇಳಿದರು.ಎನ್‌.ಟಿ.ಎಚ್ ನಿರ್ಣಾಯಕ ಪಾತ್ರ ವಹಿಸಿರುವ ಪಂಬನ್ ಸೇತುವೆ, ಮೆಟ್ರೋ ರೈಲು ಯೋಜನೆಗಳು, ಬುಲೆಟ್ ರೈಲು ಯೋಜನೆ, ಜಲ ಜೀವನ್ ಮಿಷನ್, ಡ್ರೋನ್ ಪ್ರಮಾಣೀಕರಣ ಮತ್ತಿತರ ಪ್ರಮುಖ ಯೋಜನೆಗಳನ್ನು ಸಚಿವರು ಎತ್ತಿ ತೋರಿಸಿದರು."ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಗುರಿಯ ಜೊತೆಗೆ, ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಸರ್ಕಾರಿ ವಲಯದಲ್ಲಿ ಇವಿ ಬ್ಯಾಟರಿ ಪರೀಕ್ಷಾ ಸೌಲಭ್ಯವನ್ನು ಸ್ಥಾಪಿಸುವುದು ಭವಿಷ್ಯದ ಪೀಳಿಗೆಗೆ ಭೂಮಿಯು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ನ್ಯಾಶನಲ್ ಟೆಸ್ಟ್ ಹೌಸ್ ತನ್ನ ವಿಸ್ತೃತ ಸಾಮರ್ಥ್ಯಗಳೊಂದಿಗೆ ಇವಿ ಉದ್ಯಮಕ್ಕೆ ಹೊಸ ಮಾನದಂಡಗಳನ್ನು ನಿಗದಿಪಡಿಸುವ ನಾವೀನ್ಯತೆ ಮತ್ತು ಶ್ರೇಷ್ಠತಾ ಕೇಂದ್ರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು. , --- , . ₹12 , - , … ../8qdbSCSOTd